Winning entries could not be determined in this language pair.There was 1 entry submitted in this pair during the submission phase. Not enough entries were submitted for this pair to advance to the finals round, and it was therefore not possible to determine a winner.Competition in this pair is now closed. |
ಅನೇಕ ವರ್ಷಗಳ ಅವಧಿಯಲ್ಲಿ ಯಾವುದೇ ಹೆಚ್ಚಿನ ಪ್ರಚಾರ / ಗೊಂದಲಗಳಿಲ್ಲದೆಯೇ ನ್ಯೂಯಾರ್ಕ್ ನಗರದ ಅಧಿಕಾರಿಗಳು , ಪಾದಚಾರಿ ದೀಪಗಳ ಗುಂಡಿಗಳನ್ನು ನಿಷ್ಕ್ರಿಯಗೊಳಿಸಿದರು. ಕಂಪ್ಯೂಟರೀಕ್ರತ ಟೈಮರ್ (ಗಣಕೀಕೃತ ಘಟಿಯಂತ್ರ / ಘಡಿ) ಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತವೆ ಎಂದು ನಿರ್ಧರಿಸಿದರು. ೨೦೦೪ _ ರ ವೇಳೆಗೆ ಅಂತಹ ೩,೨೫೦ _ಗುಂಡಿಗಳಲ್ಲಿ ೭೫೦ ಕ್ಕಿಂತ ಕಡಿಮೆ ಗುಂಡಿಗಳು ಕಾರ್ಯ ನಿರ್ವಹಿಸುತ್ತಿದ್ದವು. ಆದಾಗ್ಯೂ , ನಗರದ ಸರ್ಕಾರ ಈ ನಿಷ್ಕ್ರಿಯ ಗುಂಡಿಗಳನ್ನು ತೆಗೆದು ಹಾಕಿರಲಿಲ್ಲ. ಹೀಗೆ ಅದು ಅನೇಕ ಬೆರಳುಗಳನ್ನು ವ್ಯರ್ಥ ವಾಗಿ ಗುಂಡಿ ಅದುಮುವಂತೆ ಸಂಕೇತಿಸುತ್ತಿತ್ತು(ಸೂಚಿಸುತ್ತಿತ್ತು/ ಮಾಡುತ್ತಿತ್ತು.) ಮೊದಲಿಗೆ ಅವುಗಳನ್ನು ತೆಗೆದು ಹಾಕಲು ತಗಲುವ ವೆಚ್ಚ ದ ಕಾರಣ ಈ ಗುಂಡಿಗಳು ಉಳಿದುಕೊಂಡವು. ನಂತರ ಈ ಸೂಕ್ತವಲ್ಲ (ನಿಷ್ಕ್ರಿಯ ) ಗುಂಡಿಗಳೂ ಒಂದು ಉದ್ದೇಶ ಪೂರೈಸುತ್ತಿರುವುದು ಕಂಡು ಬಂದಿತು. ಇಸ್ರೇಲ್ ನ ನೆಗೆವ್ ನಲ್ಲಿರುವ ಬೆನ್ ಗುರಿಯೋನ್ ವಿಶ್ವವಿದ್ಯಾನಿಲಯದ ಟಾಲ್ ಓರೊನ್ ಗಿಲ್ಯಾದ್ ಹೇಳುವಂತೆ ಯಾವ ಪಾದಚಾರಿಗಳು ಗುಂಡಿ ಅದುಮುತ್ತಾರೆಯೋ ಅವರು ಹಸಿರು ಮನುಷ್ಯ ಬರುವ ಮುಂಚೆ ದಾಟುವುದು ವಿರಳ (ದಾಟುವ ಸಾಧ್ಯತೆ ಕಡಿಮೆ). ದಾಟುವಾಗಿನ ವರ್ತನೆಗಳನ್ನು ಅಧ್ಯಯನ ಮಾಡಿರುವ ಆಕೆ ಗಮನಿಸುವುದೇನೆಂದರೆ ಜನರು ತಮ್ಮ ಸಹಯೋಗವನ್ನು ಅಪೇಕ್ಷಿಸುವ ಉದ್ದೇಶವಿರುವ ವ್ಯವಸ್ಥೆಗೆ ಕೂಡಲೇ ವಿಧೇಯರಾಗಿರುತ್ತಾರೆ. ಸೂಕ್ತವಲ್ಲದ (ನಿಷ್ಕ್ರಿಯ ) ಗುಂಡಿಗಳು ಒಂದು ರೀತಿಯ ಪ್ಲೇಸ್ಬೊ (ಕಣ್ಣು ಕಟ್ಟು/ ಐಂದ್ರಜಾಲ ) ಪರಿಣಾಮವನ್ನು ಬೀರುತ್ತವೆ ಏಕೆಂದರೆ ಜನರು ವ್ಯವಸ್ಥೆಯ ಮೇಲೆ ತಮ್ಮ ನಿಯಂತ್ರಣವನ್ನು ಇಷ್ಟ ಪಡುತ್ತಾರೆ ಎಂದು ಎನ್ ಅರ್ಬೊರ್ ನ ಮಿಚಿಗನ್ ವಿಶ್ವವಿದ್ಯಾನಿಲಯದ (ಹ್ಯೂಮನ್- ಕಂಪ್ಯೂಟರ್ ಇಂಟರಕ್ಷನ್) ಮನುಷ್ಯ - ಗಣಕ ಯಂತ್ರ ದ ಪರಸ್ಪರಪ್ರಭಾವ ತಜ್ಞರಾದ ಎಯ್ತಾನ್ ಆದರ್ ಹೇಳುತ್ತಾರೆ. ಡಾ. ಆದರ್ ಗಮನಿಸುವಂತೆ ಆತನ ವಿದ್ಯಾರ್ಥಿಗಳು ಕ್ಲಿಕ್ (ಒತ್ತು) ಆಗುವ 'ಸೇವ್ (ಉಳಿಸಿ) ' ಗುಂಡಿ ಇರುವ ಸಾಫ್ಟ್ ವೆರ್ ಗಳನ್ನು ಸಾಮಾನ್ಯವಾಗಿ ರಚಿಸುತ್ತಾರೆ. ಅದುಮಿದ ಗುಂಡಿಯ ಕೆಲಸವೂ ಸ್ವಾಭಾವಿಕವಾಗಿ (ಸ್ವಯಂ ಚಾಲಿತವಾಗಿ) ಸೇವ್ (ಉಳಿದ ) ಆಗಿಯೇ ಇರುತ್ತದೆ ಆದರೂ ಬೇರೆ ಯಾವುದೇ ಕಾರ್ಯ ವಿಲ್ಲದ ಈ ಸೇವ್ ಗುಂಡಿ ಬಳಕೆದಾರರಿಗೆ ಅದರ ಆಶ್ವಾಸನೆಯನ್ನು ಕೊಡುತ್ತದೆ. ಇದನ್ನು ಯಂತ್ರ ಜಗತ್ತಿನ ಶೀತಲತೆಗೆ ಹಿತವಾದ ವಂಚನೆಯ ಸ್ಪರ್ಶದ ಹಾಗೆ ಅರ್ಥೈಸಬಹುದು ಎಂದು ಅವರು ಹೇಳುತ್ತಾರೆ. ಇದು ಒಂದು ದೃಷ್ಠಿ ಕೋನ. ಆದರೆ ,ಈ ಕಣ್ಣುಕಟ್ಟು ಗುಂಡಿಗಳು , ಕನಿಷ್ಠಪಕ್ಷ ರಸ್ತೆ ದಾಟುವಿಕೆಯಲ್ಲಿ, ಕಪ್ಪು ಛಾಯೆಯನ್ನು ಹೊಂದಿದೆ. ವಿನ್ನೆಸಿ ನ ಫಾಕ್ಟ್ನಮ್ ಸಂಸ್ಥೆ ಯಲ್ಲಿ ಸಂಚಾರಿ ನಿಯಮಯಗಳ ಮನಶಾಸ್ತ್ರ ಗಳನ್ನು ಅಧ್ಯನಮಾಡಲಾಗುತ್ತದೆ . ಇದರ ಮುಖ್ಯಸ್ಥ ರಾಲ್ಫ್ ರಿಸೇರ್ ಪರಿಗಣಿಸುವುದೇನೆಂದರೆ ಅವುಗಳ ಇರುವಿಕೆಯಬಗ್ಗೆ ಪಾದಚಾರಿಗಳ ತಿಳುವಳಿಕೆ ಮತ್ತು ಪರಿಣಾಮವಾಗಿ ಆದ ವಂಚನೆಯ ಬಗ್ಗೆ ಅಸಮಾಧಾನ, ಈಗ ಆ ಲಾಭಗಳನ್ನು ಹಿಮ್ಮೆಟ್ಟಿಸುತ್ತದೆ. | Entry #25516 — Discuss 0 — Variant: Not specified
|